ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಜೇಶ್ವರ:ಸಾರಾಯಿ ಪ್ರಕರಣದ ಆರೋಪಿಯ ಬಂಧನ

ಮಂಜೇಶ್ವರ:ಸಾರಾಯಿ ಪ್ರಕರಣದ ಆರೋಪಿಯ ಬಂಧನ

Thu, 14 Jan 2010 14:43:00  Office Staff   S.O. News Service
ಮಂಜೇಶ್ವರ, ಜನವರಿ 14:ಅಕ್ರಮ ಸಾರಾಯಿ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಆರೀಪಿಯೋರ್ವನನ್ನು ಮಂಜೇಶ್ವರ ಪೋಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಂಜೇಶ್ವರದ ಅಣ್ನು ಯಾನೆ ಅನಂತೇಶ್ವರ ಎಂದು ಗುರುತಿಸಲಾಗಿದೆ. ಈತ ಆಕ್ರಮ ಸಾರಾಯಿ ಸಾಗಾಟದ ಪ್ರಮುಖ ಆರೋಪಿಯೆಂದು ಪೋಲೀಸರು ತಿಳಿಸಿದ್ದಾರೆ. ಕಳೆದ ರಾತ್ರಿ ಗುಡ್ಡೆಗೇರಿಯ ಈತನ ಮನೆಯಿಂದ ಬಂಧಿಸಲಾಗಿದೆಯೆಂದು ಪೋಲೀಸರು ತಿಳಿಸಿದ್ದಾರೆ. ಈ ಇತ್ತೀಚೆಗೆ ಕ್ರೆಡಿಟ್ ಕಾರ್ಡ್ ಪ್ರಕರಣವೊದರಲ್ಲಿ ಮಂಗಳೂರಿನಲ್ಲಿ ಬಂಧಿತನಾಗಿದ್ದನು.
 

ತನಿಖೆಗೆ ಮುಂಬೈಗೆ ತೆರಳಿದ ಪೋಲೀಸರ ತಂಡ ಬರಿಗೈಯಲ್ಲಿ ವಾಪಸ್
 
ಹವಾಲಾ ಹಣ ವ್ಯವಹಾರವೊಂದರಲ್ಲಿ ನಡೆದ ಘರ್ಷಣೆಯಲ್ಲಿ ಯುವಕನನ್ನು ಅಪಹರಿಸಿ ಯುವಕನೋರ್ವನನ್ನು ಹತ್ಯೆಗೈದ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಮುಂಬೈಗೆ ತೆರಳಿದ ತನಿಖಾ ತಂಡ ಬರಿಗೈಯಲ್ಲಿ ಮರಳಿ ಬಂದಿದೆ. ಪೆರುಂಬಳ ಕಡವ್‌ನ ದಾವೂದ್(೨೭) ಕಳೆದ ತಿಂಗಳು ಹವಾಲಾ ಹಣ ವ್ಯವಹಾರದ ಮದ್ಯೆ ಉಂಟಾದ ಘರ್ಷಣೆಯಲ್ಲಿ ಹತ್ಯೆ ಗೀಡಾಗಿದ್ದರು.  ಈ ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಪೋಲೀಸರು ಬಂಧಿಸಿದ್ದರು. ಆದರೆ ಕೊಲೆ ನಡೆಸಿದ ನೈಜ ಆರೋಪಿಗಳು ಮುಂಬೈಗೆ ಪರಾರಿಯಾದ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ದೊರೆತಿತ್ತು. ಈ ಹಿನ್ನಲೆಯಲ್ಲಿ ಮಂಜೇಶ್ವರ ಸಬ್ ಇನ್ಸಪೆಕ್ಟರ್ ಮನೋಜ್, ಸ್ಪೆಷಲ್ ಬ್ರಾಂಚ್ ಅಡೀಶನಲ್ ಸಬ್ ಇನ್ಸಪೆಕ್ಟರ್ ಫಿಲಿಪ್, ಮ್ಯಾಥ್ಯೂ ,ಮೊಯ್ದೀನ್ ಕುಟ್ಟಿ ಮೊದಲಾದ ತನಿಖಾ ತಂಡ ಮುಂಬೈಗೆ ತೆರಳಿದ್ದರು. ಆದರೆ ಯಾವುದೇ ಆರೋಪಿಗಳನ್ನು ಪತ್ತೆ ಹಚ್ಚಲಾಗದೆ ತಂಡವು ಮರಳಿದೆ. ಕೆಲವು ಆರೋಪಿಗಳು ಕೊಲ್ಲಿ ರಾಷ್ಟ್ರಕ್ಕೆ ಪರಾರಿಯಾದ ಬಗ್ಗೆ ಹೇಳಲಾಗುತ್ತಿದ್ದು ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲವೆಂದು ಪೋಲೀಸ್ ಮೂಲಗಳು ತಿಳಿಸಿದೆ. 

 

Share: